ಕರ್ನಾಟಕ ಸಾಹಿತ್ಯಕವಾಗಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಿತ್ರಮ್ಮ…!!!

Listen to this article

ಕನ್ನಡ ಜಾನಪದ ಪರಿಷತ್ ಹೊಳಲ್ಕೆರೆ,
ಕರ್ನಾಟಕ ಸಾಹಿತ್ಯಕವಾಗಿ ಅತ್ಯಂತ ಶ್ರೀಮಂತ ಪರಂಪರೆ ಹೊಂದಿದೆ.
ಕನ್ನಡ ನಾಡಿಗೆ ಅನೇಕ ಕವಿಗಳು,ಸಾಹಿತಿಗಳು ದಿಗ್ಗಜರು ಸಾಹಿತ್ಯದ ರಸದೌತಣ ನೀಡಿ ನಾಡಿನ ಉಸಿರಾಗಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಮಿತ್ರಮ್ಮ ಹೇಳಿದರು.
ತಾಳ್ಯ ಹೋಬಳಿ ಎಚ್,ಡಿ,ಪುರ ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಶಾಲಾ ಆವರಣದಲ್ಲಿ ತಾಳ್ಯ ಹೋಬಳಿಯ ಕನ್ನಡ ಜನಪದ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರ ಪದಗ್ರಹಣ, ಹಾಗೂ ಜಾನಪದ ಸೊಗಡು ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು ಈ ಹಿಂದೆ ಭಾಗದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಹೋಬಳಿ ಮಟ್ಟದ ಕನ್ನಡ ರಾಜ್ಯೋತ್ಸವ, ಕನ್ನಡ ನುಡಿ ಹಬ್ಬ,ಮುಂತಾದ ಕಾರ್ಯಕ್ರಮಗಳನ್ನ ಈ ಭಾಗದಲ್ಲಿ ಸಾಹಿತಿಗಳು, ಕನ್ನಡ ಮನಸ್ಸುಗಳು ತುಂಬಾ ಅದ್ದೂರಿಯಾಗಿ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎನ್. ಶಿವಮೂರ್ತಿ
ಜಾನಪದ ಸಾಹಿತ್ಯ ಎಲ್ಲಾ ಸಾಹಿತ್ಯಗಳ ತಾಯಿ ಬೇರು. ಪ್ರಾಚೀನ ಕಾಲದಲ್ಲಿ ನಮ್ಮ ಪೂರ್ವಜರು ಪ್ರತಿಯೊಂದು ಕೆಲಸ ಮಾಡುವಾಗ ಹಾಡುವ ಮೂಲಕ ತಮ್ಮ ಆಯಾಸ ಕಳೆದುಕೊಳ್ಳುತ್ತಿದ್ದರು ಇಂದು ಆಧುನಿಕ ಪ್ರಪಂಚದ ಸೆಳೆತಕ್ಕೆ ಸಿಕ್ಕು ವಿಜ್ಞಾನ ತಂತ್ರಜ್ಞಾನ ದಿನಗಳಲ್ಲಿ ನಮ್ಮ ಶ್ರೀಮಂತ ಜಾನಪದ ಗ್ರಾಮೀಣ ಭಾಗದಲ್ಲಿ ಮರೀಚಿಕೆಯಾಗುತ್ತಿದೆ ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಜಾನಪದ ಗ್ರಾಮೀಣ ಭಾಗದಲ್ಲಿ ಹುಲಸಾಗಿ ಬೆಳೆದಿರುವ ಸಾಹಿತ್ಯವಾಗಿದೆ ಒಂದು ತಾಯಿಂದಿರು ತಮ್ಮ ಮಕ್ಕಳನ್ನು ಸಂತೈಸುವಾಗ ಸೊಗಸಾದ ಜಾನಪದಗಳನ್ನು ಹಾಡಿ ಮಲಗಿಸುತ್ತಿದ್ದರು ಇಂಥ ಸಾಹಿತ್ಯ ಮತ್ತೆ ಬೆಳೆಸಬೇಕಾಗಿದೆ ಕನ್ನಡ ನಾಡು -ನುಡಿ ಭಾಷೆ, ಧಾರ್ಮಿಕತೆಗೆ ಕನ್ನಡ ಮನಸ್ಸುಗಳ ಸಹಕಾರ ಇರಬೇಕು ಎಂದರು.
ತಾಲ್ಲೂಕು ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ರಾ.ಸು ತಿಮ್ಮಯ್ಯನವರು ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ 2023ರ ಗೌರವ ಪುರಸ್ಕಾರವನ್ನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾವಿರಾರು ಸೋಬಾನೆಗಳನ್ನ ಹೇಳಿರುವ ವಿದ್ಯಾಭ್ಯಾಸವೇ ಇಲ್ಲದ ಸಿರಿಯಜ್ಜಿಯವರನ್ನ ಗುರುತಿಸಿ ಗೌರವ ಸಮರ್ಪಣೆ ಮಾಡಿರುವುದು ಶ್ಲಾಘನೀಯ ಕಾರ್ಯಇಂಥ ಕೆಲಸಗಳು ಗ್ರಾಮೀಣ ಭಾಗದಲ್ಲಿ ಎಲೆಮರೆಕಾಯಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಾನಪದರಿಗೆ ಸಿಗುವಂತಾಗಬೇಕು ಎಂದು ಹೇಳುತ್ತಾ ಮಕ್ಕಳನ್ನು ರಂಜಿಸುವ ಜಾನಪದ ಗೀತೆಗಳನ್ನು ಹಾಡುವ ಮೂಲಕ ತಾಳ್ಯ ಹೋಬಳಿಯ ಕನ್ನಡ ಜನಪದ ಪರಿಷತ್ತಿನ ಘಟಕದ ನೂತನ ಅಧ್ಯಕ್ಷ ಸ್ಥಾನವನ್ನು ಶಿಕ್ಷಕರು ಸಿಆರ್‌ಪಿಗಳಾದ ಟಿ.ರಂಗಸ್ವಾಮಿಯವರಿಗೆ ವಹಿಸಿದರು, ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯತೀಶ್ವರಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸರ್ವರನ್ನು ಎಸ್ ಎಲ್ ಎನ್ ಆರ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜೆ.ರಂಗಸ್ವಾಮಿ ಸ್ವಾಗತಿಸಿದರು, ದೈಹಿಕ ಶಿಕ್ಷಕರಾದ ಟಿ,ದೇವರಾಜು ನಿರೂಪಿಸಿದರು ಉಪಸ್ಥಿತಿ ಎಸ್ ಎಲ್ ಎನ್ ಆರ್ ಸಂಸ್ಥೆಮುಖ್ಯ ಶಿಕ್ಷಕರಾದ ಎಚ್,ಎನ್ ಮಾರುತಿ, ಶಿಕ್ಷಕರಾದ ಭಾರತಿ, ಶ್ವೇತಾ,ಶಿವಮೂರ್ತಿ ವಂದಿಸಿದರು ಕ ಜಾ ಪ ಸಂಚಾಲಕರಾದ ಲತಾ, ಬಸವರಾಜ್,ಮುಖ್ಯಶಿಕ್ಷಕರದಾ ಕುಮಾರಸ್ವಾಮಿ, ಶಾಂತಕುಮಾರ್ ವೆಂಕಟೇಶ್,ಸಿ,ಆರ್‌,ಪಿಗಳಾದ ಕೆ. ಎಂ.ವೀರೇಶ್, ಗ್ರಂಥಾಲಯ ಪಾಲಕರಾದ ರಂಗಸ್ವಾಮಿ, ಶಿಕ್ಷಕರು,ವಿದ್ಯಾರ್ಥಿಗಳು,ಕನ್ನಡ ಮನಸ್ಸುಗಳು ಸಾರ್ವಜನಿಕರು ಹಾಜರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend