ಮೋಸದಲ್ಲಿ ಬೀಳುವ ದೊಡ್ಡ ಜಾಲವೇ ಇದೆ. ಹೀಗಾಗಿ ಆನ್‌ಲೈನ್ ಸುರಕ್ಷತೆಯ ಬಗ್ಗೆ ಸಲಹೆಗಳನ್ನು ಪಡೆಯಬೇಕು…!!!

ಉಜ್ಜಿನಿ:- ಈ ಡಿಜಿಟಲ್ ಜಮಾನದಲ್ಲಿ ನಾವು ಬಹುಬೇಗ ತೊಂದರೆಗೆ ಸಿಲುಕಿಕೊಳ್ಳುತ್ತದ್ದೇವೆ. ನಯವಾಗಿ ಮಾತನಾಡಿ ನಮ್ಮನ್ನು ಮೋಸದಲ್ಲಿ ಬೀಳುವ ದೊಡ್ಡ ಜಾಲವೇ ಇದೆ. ಹೀಗಾಗಿ ಆನ್‌ಲೈನ್ ಸುರಕ್ಷತೆಯ ಬಗ್ಗೆ ಸಲಹೆಗಳನ್ನು ಪಡೆಯಬೇಕು
ಫೋನ್ ಕರೆಗಳ ಮೂಲಕ,ಸಂದೇಶಗಳು, ನಿಮ್ಮನ್ನು ಸಂಪರ್ಕಿಸುವ ಸೈಬರ್ ಕ್ರಿಮಿನಲ್‌ಗಳು ಬಳಿಕ ಮೋಸದಿಂದ ನಿಮ್ಮ ಬ್ಯಾಂಕ್ ಖಾತೆ, ವೈಯಕ್ತಿಕ ವಿವರಗಳಿಗೆ ಕನ್ನ ಹಾಕಿ ಸಂಕಷ್ಟಕ್ಕೆ ತಳ್ಳುತ್ತಾರೆ. ಹೀಗಾಗಿ ಇಂತಹ ಅಕ್ರಮಗಳ ಬಗೆಗೆ ಬಲು ಎಚ್ಚರಿಕೆಯಿಂದ ಇರಬೇಕಾದದ್ದು ಬಹಳ ಅಗತ್ಯ. ಇದಕ್ಕಾಗಿಯೇ ಇಂತಹ ಮೋಸಗೊಳಿಸುವ ತಂತ್ರಗಳಿಗೆ ಬಲಿಯಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಲು 1930 ಸಂಪರ್ಕ ಮಾಡಬೇಕು, ಎಲ್ಲರೂ ದ್ವಿಚಕ್ರ ವಾಹನವನ್ನು ಬಳಸುತ್ತಿದ್ದೀರಿ ಎಲ್ಲರೂ ತಮ್ಮ ವಾಹನಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ತಪ್ಪದೇ ಹೆಲ್ಮೆಟನ್ನು ಹಾಕಬೇಕು ಎಂದು ಎಂದು ASI ವೀರಭದ್ರಯ್ಯ ತಿಳಿಸಿದರು. ಈ ಸಂದರ್ಭದಲ್ಲಿ ನಾಗರಾಜ ಕೋಗಳಿ ,ಸುರೇಶ್ ಪೊಲೀಸ್ ಮತ್ತು ನಿಂಬಳಗೇರೆ ಸಾರ್ವಜನಿಕರು ಇದ್ದರು…

ವರದಿ. ವಿನಾಯಕ ಕೊಟ್ಟೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *