ಸರ್ವ ಜನಾಂಗದ ಪೂಜಿತ ಶ್ರೀ ವಿಘ್ನೇಶ್ವರ ಮತ್ತು ಆಂಜನೇಯ ಉಜ್ಜಯಿನಿ ಜಗದ್ಗುರುಗಳ ಅಭಿಮತ
ಕೊಟ್ಟೂರಿನ ಶ್ರೀ ತೇರು ಬಯಲು ಬಸವೇಶ್ವರ ಯುವಕ ಮಂಡಳಿ ಆಯೋಜಿಸಿದ್ದ 37ನೇ ವರ್ಷದ ಗಣೇಶ ಮಹೋತ್ಸವದ ಪಾದ ಪೂಜೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನದೇಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಭಗವತ್ಪಾದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು ವಿಘ್ನೇಶ್ವರ ಸರ್ವ ಜನರ ಆರಾಧ್ಯ ಪೂಜ್ಯನೀಯ ಗುರುವಾಗಿ ಜಗತ್ತಿನ ಸಂಕಷ್ಟಗಳನ್ನ ದೂರ ಮಾಡುವ ಶಕ್ತಿಯನ್ನು ಹೊಂದಿದ್ದಾರೆ ಎಂದು ತಮ್ಮ ಆಶೀರ್ವಚನ ನುಡಿ ಸಂದೇಶಗಳನ್ನು ದಯಪಾಲಿಸಿದರು ಹಿಂದೂ ಧರ್ಮದ ಅನೇಕ ಪಂಗಡಗಳು ತಮ್ಮ ತಮ್ಮ ದೇವರುಗಳನ್ನ ಆರಾಧಿಸುವುದು ವಾಡಿಕೆ ಆದರೆ ಸರ್ವರೂ ಒಟ್ಟಾಗಿ ಸೇರಿ ಆಚರಿಸುವ ಹಬ್ಬ ಎಂದರೆ ಅದು ಶ್ರೀ ವಿನಾಯಕನ ಪ್ರತಿಷ್ಠಾಪನೆ ಹಲವಾರು ದೇಶಗಳಲ್ಲಿ ಆಚರಿಸಲ್ಪಡುವ ಹಾಗೂ ಸಾವಿರಾರು ವರ್ಷಗಳ ಹಿಂದಿನಿಂದಲೂ ಇಂಡೋನೇಷಿಯಾದಲ್ಲಿ ಗಣೇಶನ ಪ್ರತಿಷ್ಠಾಪನೆಯಾಗಿದ್ದು ಭಾರತದಲ್ಲಿ ಮಾತ್ರವಲ್ಲದೆ ವಿನಾಯಕ ವಿಶ್ವ ವ್ಯಾಪಿ ಎನ್ನುವುದನ್ನು ಡಾಕ್ಟರ್ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಡೋಣೂರು ಜಾನು ಕೋಟಿ ಮಠ ಕೊಟ್ಟೂರು ಪೂಜ್ಯರು ತಮ್ಮ ಅಭಿಮತ ವ್ಯಕ್ತಪಡಿಸಿದರು ಇದೇ ಸಂದರ್ಭದಲ್ಲಿ ಶ್ರೀ ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿಗಳು ಮಾಜಿ ಜಿಲ್ಲಾ ಪಂಚಾಯಿತಿಯ ಸದಸ್ಯರು ಆದ ಶ್ರೀಯುತ ಎಂಎಂಜಿ ಹರ್ಷವರ್ಧನ್ ರವರು ಉಪಸ್ಥಿತಿ ವಹಿಸಿದ್ದರು ಪಟ್ಟಣ ಪಂಚಾಯಿತಿಯ ನೂತನ ಉಪಾಧ್ಯಕ್ಷರಾದ ಜಿಎಸ್ಎಂ ಸಿದ್ದಯ್ಯನವರು ರಾಂಪುರ ವಿವೇಕಾನಂದರವರು ಜಿಎಸ್ ಎಮ್ ರಾಜಶೇಖರ್ ಸಮಿತಿಯ ಸದಸ್ಯರಾದ ಹಠವಳಗಿ ಸಂತೋಷ್ ಹತವಳಗಿ ಜಗದೀಶ್ ಮಂಜುನಾಥ್ ಅಡಿಕೆ ಕರಡಿ ಕೊಟ್ರಯ್ಯ ಪ್ರಸನ್ನ ಕುಮಾರ್ ಕಾರ್ತಿಕ್ ಇನ್ನು ಮುಂತಾದ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು…
ವರದಿ. ಎಂ. ಮಲ್ಲಿಕಾರ್ಜುನ, ಗಜಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030