ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕ ಶ್ರೀರಾಮನಗರ (ಕೋಗಳಿ ತಾಂಡ)ದ ವತಿಯಿಂದ ಇಟ್ಟಿಗಿ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆದ ಬಿ.ಕೆ ಅಬ್ಬಾಸ್ ಸರ್ ಅವರಿಗೆ ಸನ್ಮಾನ ಮಾಡಲಾಯಿತು. ತುಂಬಾ ಆತ್ಮೀಯವಾಗಿ ಮಾತನಾಡಿಸಿ ನಿಮ್ಮ ಊರಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡಲೇ ತಿಳಿಸಿ ಆದಷ್ಟು ಬೇಗ ಸಮಸ್ಯೆಗಳನ್ನ ಬಗೆಹರಿಸಿ ಕೊಡೋಣ ಎಂಬ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯಾಧ್ಯಕ್ಷರು ಅದ ದೇವರ ಮನಿ ನೀಲಪ್ಪ ಗ್ರಾಮ ಘಟಕದ ಅಧ್ಯಕ್ಷರು ಆರ್ ಪ್ರಕಾಶ್ ಉಪಾಧ್ಯಕ್ಷರು ರಾಮ ನಾಯ್ಕ್ ಎಸ್ ಸಂಘಟನಾ ಕಾರ್ಯದರ್ಶಿ ಕೃಷ್ಣ ನಾಯ್ಕ್ ಇದ್ದರು…
ವರದಿ. ಸಂತೋಷ ಮ್ಯಾಗೇರಿ ಹೂವಿನಹಡಗಲಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030