ಆಲೂರು ಹುರುಳಿ ಬಳ್ಳಿಗೆ ವಿದ್ಯುತ್ ತಂತಿ ತಗುಲಿ ಸಂಪೂರ್ಣ ಭಸ್ಮ…!!!

 

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಆಲೂರು:ಹುರುಳಿ ಬಳ್ಳಿಗೆ ವಿದ್ಯುತ್ ತಂತಿ ತಗುಲಿ ಸಂಪೂರ್ಣ ಭಸ್ಮ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕು ಆಲೂರು ಗ್ರಾಮದಲ್ಲಿ,ಹುರುಳಿ ಬಳ್ಳಿಗೆ ವಿದ್ಯುತ್ ತಂತಿ ತಗುಲಿ ಸಂಪೂರ್ಣ ಭಸ್ಮವಾದ ಘಟನೆ ಗುರುವಾರ ಸಂಜೆ ಜರುಗಿದೆ.ಗ್ರಾಮದ ಗೌಡ್ರು ಬಸವರಾಜ ತಮ್ಮ ಹೊಲದಲ್ಲಿದ್ದ ಕಾಳು ಸಹಿತ ಹುರುಳಿ ಬಳ್ಳಿಯನ್ನು,ಟ್ರಾಕ್ಟ್ ರ್ ನಲ್ಲಿ ಹೇರಿಕೊಂಡು ಗ್ರಾಮದಲ್ಲಿರುವ ಕಣಕ್ಕೆ ತರುವಾಗ.ಕಣದ ಮಾರ್ಗದ ರಸ್ಥೆಯ ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿದೆ,ಪರಿಣಾಮ ಟ್ರಾಕ್ಟರ್ ಲ್ಲಿದ್ದ ಹುರುಳಿಗೆ ಬೆಂಕಿ ಹತ್ತಿಕೊಂಡು ಕಾಳಿರುವ ಹುರುಳಿ ಬಳ್ಳಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.ಮೂವತ್ತು ಸಾವಿರ ಮೌಲ್ಯದಷ್ಟು ನಷ್ಟವಾಗಿದೆ ಎಂದು ತಿಳಿದುಬಂದ್ದು,ವಿಷಯ ತಿಳಿದ ಜಗಳೂರು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಅಗ್ನಿ ನಂದಿಸಿದ್ದಾರೆ.ಘಟನಾ ಸ್ಥಳಕ್ಕೆ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ನಾಗರತ್ನಮ್ಮ ಬೆಟ್ಟಿನೀಡಿದ್ದು, ಸಂಬಂಧಿಸಿದ ಇಲಾಖೆಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ..

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *